Friday, February 7, 2020

ಭಾರತದಲ್ಲಿ ರಿಯಲ್‌ ಮಿ C3 ಲಾಂಚ್!..ಬೆಲೆ 6999ರೂ!

ನೀವು ಕಾಣು ವಂಥದ್ದು

ಇನ್ನು ಸ್ಕ್ರೀನ್-ಟು-ಬಾಡಿ ಅನುಪಾತ 89.8% ರಷ್ಟಿದೆ. ಜೊತೆಗೆ ಡಿಸ್‌ಪ್ಲೇ ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ನೀಡಲಾಗಿದೆ. ಈ ಡಿಸ್‌ಪ್ಲೇ 270 ಪಿಪಿಐ ಸಾಂದ್ರತೆಯನ್ನ ಹೊಂದಿದ್ದು, ಇದು ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್, ಮಲ್ಟಿ-ಟಚ್ ಸ್ಕ್ರೀನ್‌ ಅನ್ನು ಒಳಗೊಂಡಿದೆ.


ಪ್ರೊಸೆಸರ್‌

ರಿಯಲ್‌ಮಿ C3 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ ಜಿ 70 ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು 3GB RAM ಮತ್ತು 32GB ಸ್ಟೋರೇಜ್‌ ಹಾಗೂ 4GB RAM ಮತ್ತು 64GB ಶೇಖರಣಾ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256GB ವರೆಗೂ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಿಬಹುದಾಗಿದೆ.

ಕ್ಯಾಮೆರಾ ಮಾದರಿ

ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು. ಮೊದಲನೇ ಕ್ಯಾಮೆರಾ 12ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಎರಡನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾ 5ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಕ್ಯಾಮೆರಾಗಳಲ್ಲಿ 4 x ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್‌ ದಿ ಫೋಕಸ್, 4000 x 3000 ಪಿಕ್ಸೆಲ್‌ ಇಮೇಜ್‌ ರೆಸಲ್ಯೂಶನ್‌, ಹೈ ಡೈನಾಮಿಕ್ ರೇಂಜ್ ಮೋಡ್ ನಂತಹ ಫೀಚರ್ಸ್‌ಗಳನ್ನ ಸಹ ನೀಡಲಾಗಿದೆ.



ಬ್ಯಾಟರಿ ಮತ್ತು ಇತರೆ

ಇನ್ನು ರಿಯಲ್‌ಮಿ C3 ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದ್ದು, ಇದು 43.9 ಗಂಟೆಗಳ ಟಾಕ್ ಟೈಮ್, 10.6 ಗಂಟೆಗಳ PUBG, 20.8 ಗಂಟೆಗಳ ಆನ್‌ಲೈನ್ ಮೂವಿ ಪ್ಲೇಬ್ಯಾಕ್ ಮತ್ತು 727.7 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ಪ್ಯಾಕ್‌ಆಪ್‌ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ವೈ-ಫೈ, ಯುಎಸ್‌ಬಿ ಒಟಿಜಿ, ಮೈಕ್ರೋ ಯುಎಸ್‌ಬಿ ಪೋರ್ಟ್, ವೋಲ್ಟ್‌ಇ, ಬ್ಲೂಟೂತ್ 5, ಜಿಪಿಎಸ್ ,ಎ-ಜಿಪಿಎಸ್ ಅನ್ನು ಬೆಂಬಲಿಸಲಿದೆ. ಜೊತೆಗೆ ಮ್ಯಾಗ್ನೆಟಿಕ್ ಇಂಡಕ್ಷನ್ ಸೆನ್ಸರ್, ಲೈಟ್ ಸೆನ್ಸರ್, ಗೈರೊ-ಮೀಟರ್ ಮತ್ತು ಅಕ್ಸೆಲೆರೊಮೀಟರ್ ಅನ್ನು ಒಳಗೊಂಡಿದೆ.


ಬೆಲೆ ಮತ್ತು ಲಭ್ಯತೆ

ಸದ್ಯ ಈ ಸ್ಮಾರ್ಟ್‌ಫೋನ್‌ ಬಜೆಟ್‌ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು, ರಿಯಲ್‌ಮಿ C3 ಭಾರತದಲ್ಲಿ 3GB RAM ಮತ್ತು 32GB ಶೇಖರಣಾ ಸಾಮರ್ಥ್ಯದ ಆಯ್ಕೆಗೆ 6,999,ರೂ ಮತ್ತು 4GB RAM ಮತ್ತು 64GB ಶೇಖರಣಾ ಮಾದರಿಗೆ 7,999 ರೂ.ಬೆಲೆಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 14 ರಿಂದ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌, ರಿಯಲ್‌ಮಿ.ಕಾಮ್ ಮೂಲಕ ಲಭ್ಯವಾಗಲಿದ್ದು, ಬ್ಲೇಜಿಂಗ್ ರೆಡ್ ಮತ್ತು ಫ್ರೋಜನ್ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಪರ

1. ಕಡಿಮೆ ಬಡ್ಜೆಟ್

2. ರೆಡ್ಮಿ ಯ ಬದಲಿ ಆಯ್ಕೆ

3. ಮೀಡಿಯಾ ಟೆಕ್ G70 ಚೀಪ್ ಸೆಟ್ ಇದೆ ಮೊದಲನೆಯದು

4. Redmi 8 ಬದಲಿ ಮತ್ತು extraordinary

5. Pubg ಪ್ರಿಯರಿಗೆ ಹೇಳಿ ಮಾಡಿಸಿದ ಫೋನ್ ಇದಾಗಿದೆ


ವಿರೋಧ

1. ಯಾವ ಕ್ಯಾಮೆರಾ ಸೆನ್ಸಾರ್ ಬಳಕೆ ಎಂಬುದು ಕೊಟ್ಟಿಲ್ಲ